Monday 6 October 2014

ಬಾನಲ್ಲು ನೀನೇ , ಭುವಿಯಲ್ಲೂ ನೀನೇ


ಬಾನಲ್ಲು ನೀನೇ , ಭುವಿಯಲ್ಲೂ ನೀನೇ (೨)
ಎಲ್ಲೆಲು ನೀನೇ ,ನನ್ನಲ್ಲೂ ನೀನೇ
ಬಾನಲ್ಲು ನೀನೇ , ಭುವಿಯಲ್ಲೂ ನೀನೇ ।।

ಬರಿದಾದ ನನ್ನ, ಬಾಳಲ್ಲಿ ಬಂದೆ
ಬಾಳಲ್ಲಿ ಬಂದು, ಸಂತೋಷ ತಂದೆ
ಸಂತೋಷ ತಂದು, ಮರೆಯಾಗಿ ಹೋದೆ
ಮರೆಯಾಗಿ ಹೋಗಿ, ಹೂವಾಗಿ ಬಂದೆ
ಹೂವಾಗಿ ಬಂದು, ಮಡಿಲಲ್ಲಿ ನಿಂದೆ

ಮುಗಿಲಲ್ಲು ನೀನೇ, ಮನದಲ್ಲೂ ನೀನೇ (೨)
ಎಲ್ಲೆಲು ನೀನೇ ,ನನ್ನಲ್ಲೂ ನೀನೇ
ಬಾನಲ್ಲು ನೀನೇ , ಭುವಿಯಲ್ಲೂ ನೀನೇ

ನನ್ನಿಂದ ನೀನು ,ದೂರಾಗಿ ಹೋದೆ
ದೂರಾಗಿ ಹೋಗಿ , ಕಣ್ಣೀರ ತಂದೆ
ಕಣ್ಣೀರಿನಲ್ಲೇ , ನಾ  ಕರಗಿ ಹೋದೆ
ನಾ ಕರಗಿ ಹೋಗಿ ,ಬಯಲಲ್ಲಿ ಬಂದೆ
ಈ ಬಯಲು ದಾರಿಯ ,ಲತೆಯಾಗಿ ನಿಂದೆ

ನೋವಲ್ಲು  ನೀನೆ , ನಗುವಲ್ಲೂ  ನೀನೇ (೨)
ಎಲ್ಲೆಲು ನೀನೇ ,ನನ್ನಲ್ಲೂ ನೀನೇ
ಬಾನಲ್ಲು ನೀನೇ , ಭುವಿಯಲ್ಲೂ ನೀನೇ ।।