Monday 6 October 2014

ಬಾನಲ್ಲು ನೀನೇ , ಭುವಿಯಲ್ಲೂ ನೀನೇ


ಬಾನಲ್ಲು ನೀನೇ , ಭುವಿಯಲ್ಲೂ ನೀನೇ (೨)
ಎಲ್ಲೆಲು ನೀನೇ ,ನನ್ನಲ್ಲೂ ನೀನೇ
ಬಾನಲ್ಲು ನೀನೇ , ಭುವಿಯಲ್ಲೂ ನೀನೇ ।।

ಬರಿದಾದ ನನ್ನ, ಬಾಳಲ್ಲಿ ಬಂದೆ
ಬಾಳಲ್ಲಿ ಬಂದು, ಸಂತೋಷ ತಂದೆ
ಸಂತೋಷ ತಂದು, ಮರೆಯಾಗಿ ಹೋದೆ
ಮರೆಯಾಗಿ ಹೋಗಿ, ಹೂವಾಗಿ ಬಂದೆ
ಹೂವಾಗಿ ಬಂದು, ಮಡಿಲಲ್ಲಿ ನಿಂದೆ

ಮುಗಿಲಲ್ಲು ನೀನೇ, ಮನದಲ್ಲೂ ನೀನೇ (೨)
ಎಲ್ಲೆಲು ನೀನೇ ,ನನ್ನಲ್ಲೂ ನೀನೇ
ಬಾನಲ್ಲು ನೀನೇ , ಭುವಿಯಲ್ಲೂ ನೀನೇ

ನನ್ನಿಂದ ನೀನು ,ದೂರಾಗಿ ಹೋದೆ
ದೂರಾಗಿ ಹೋಗಿ , ಕಣ್ಣೀರ ತಂದೆ
ಕಣ್ಣೀರಿನಲ್ಲೇ , ನಾ  ಕರಗಿ ಹೋದೆ
ನಾ ಕರಗಿ ಹೋಗಿ ,ಬಯಲಲ್ಲಿ ಬಂದೆ
ಈ ಬಯಲು ದಾರಿಯ ,ಲತೆಯಾಗಿ ನಿಂದೆ

ನೋವಲ್ಲು  ನೀನೆ , ನಗುವಲ್ಲೂ  ನೀನೇ (೨)
ಎಲ್ಲೆಲು ನೀನೇ ,ನನ್ನಲ್ಲೂ ನೀನೇ
ಬಾನಲ್ಲು ನೀನೇ , ಭುವಿಯಲ್ಲೂ ನೀನೇ ।।



Thursday 18 September 2014

anisutide yako indu lyrics in kannada

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು
ಮಾಯದ ಲೋಕದಿಂದ, ನನಗಾಗಿ ಬಂಡವಲೆಂದು
ಆಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ
ಹಾಗೆ ಸುಮ್ಮನೆ...
ಅನಿಸುತಿದೆ ಯಕೋ ಇಂದು

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲೂ ನೀನು ಹೋದರೆ ತಳಮಳ
ಪೂರ್ಣ ಚಂದಿರ ರಾಜ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೇ ಸೆರೆಮನೆ
ತಬ್ಬಿ ನನ್ನ ಅಪ್ಪಿಕೋ ಒಮ್ಮ್ಮೆ
ಹಾಗೆ ಸುಮ್ಮನೆ....
ಅನಿಸುತಿದೆ ಯಾಕೋ ಇಂದು

ತುಟಿಗಳ ಹೂವಲಿ ಆಡದ ಮಾತಿನ ಸಿಹಿ-ಇದೆ
ಮನಸಿನ ಪುಟದಲೀ ಕೇವಲ ನಿನ್ನದೇ ಸಹಿ ಇದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೇ ಒಮ್ಮೆ
ಹಾಗೆ ಸುಮ್ಮನೆ..

hodi maga lyrics

ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ 
ಬಿಡಬೇಡ ಅವನ್ನ
ಶ್ರೀರಾಂಪುರ ಗಲ್ಲಿ ಸುತ್ತು 
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು 
ಬಿಡಬೇಡ ಅವನ್ನ 
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ 
ಬಿಡಬೇಡ  ಅವನ್ನ 
(ಬಿಡಲೇ) 
ಶ್ರೀರಾಂಪುರ ಗಲ್ಲಿ ಸುತ್ತು 
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು 
ಬಿಡಬೇಡ ಅವನ್ನ 
ಈ ಭೂಮಿ ಮ್ಯಾಲೆ ಹುಟ್ಟಿದ ಮ್ಯಾಗೆ 
ಸಾವೇ ಕಣೋ, 
ಈ ಕೈಗೆ ಮಚ್ಚು ಸಿಕ್ಕಿದ ಮ್ಯಾಗೆ 
ಬದುಕು ಕಣೋ 
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ 
ಬಿಡಬೇಡ ಅವನ್ನ
ಶ್ರೀರಾಂಪುರ ಗಲ್ಲಿ ಸುತ್ತು 
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು 
ಬಿಡಬೇಡ ಅವನ್ನ 

ಮಗ ಲವ್ ಮಾಡಬೇಡ 
ಮಗ ವೇಟ್ ಮಾಡಬೇಡ 
ಅವಳ್ನ ಮೀಟ್ ಮಾಡಬೇಡ 
ಮಾಡಿ ಹಿಂದೆ ಸುತ್ತಬೇಡ 
ಸುತ್ತಿ ಮೈ ಮರಿಬೇಡ 
ಮರೆತು ಮೋಸ ಹೋಗ ಬೇಡ ಲೆ ! 
ಹುಡ್ಗೀರ್ನೆಲ್ಲ ಮುಂದೆ ಇತ್ತು ಸ್ಕೆಚ್ಚು ಹಾಕ್ತಾರೋ 
ಪ್ರೀತಿ ಅಂತ ಹಿಂದೆ ಹೋದ್ರೆ ಚುಚ್ಚಿ ಬಿಡ್ತಾರೋ 
ಬಾಳೆ ಗೋಳು ಕಣೋ 
ಖಾಲಿ ಹಾಳೆ ಕಣೋ 
ಆ ಬ್ರಹ್ಮ ಬರೆವ ಬರಹ... 

ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ 
ಬಿಡಬೇಡ ಅವನ್ನ
ಶ್ರೀರಾಂಪುರ ಗಲ್ಲಿ ಸುತ್ತು 
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು 
ಬಿಡಬೇಡ ಅವನ್ನ 
ಎ..ಯ್ಯಾ...... 
ಎ..ಯ್ಯಾ...... 


ಮಗ ಅಡ್ಡ ಹೇಳಬೇಡ 
ಮಲ್ಗೊ ಜಾಗ ಹೇಳಬೇಡ 
ಒಬ್ನೇ ಎಲ್ಲೂ ಹೋಗಬೇಡ 
ಹೋಗಿ ಯಾರ್ನು ನಂಬಬೇಡ 
ನಂಬಿ ರಾಜಿಯಾಗಬೇಡ 
ಅದು ವ್ಯಾಪಾರ ಬೇಡಲೇ 
ಸ್ನೇಹ ಅಂತ ಓಳ್‌ಗೊಳ್ಗೆ ಸ್ಕೀಮು ಹಾಕ್ತಾರೋ 
ಒಂದೇ ತಟ್ಟೆಲಿ ಅಣ್ಣಾ ತಿಂದು ಮುಹೂರ್ತ ಇಡ್ತಾರೋ 
ಹುಟ್ಟು ದಾನ ಕಣೋ 
ಸಾವು ಗುಟ್ಟು ಕಣೋ 
ನಾನನ್ನೋನು ನಾಳೆ ಮಣ್ಣೊ........ 

ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ 
ಬಿಡಬೇಡ ಅವನ್ನ
ಶ್ರೀರಾಂಪುರ ಗಲ್ಲಿ ಸುತ್ತು 
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು 
ಬಿಡಬೇಡ ಅವನ್ನ  
ಈ ಭೂಮಿ ಮ್ಯಾಲೆ ಹುಟ್ಟಿದ ಮ್ಯಾಗೆ 
ಸಾವೆ ಕಣೋ, 
ಈ ಕೈಗೆ ಮಚ್ಚು ಸಿಕ್ಕಿದ ಮ್ಯಾಗೆ 
ಬದುಕು ಕಣೋ 
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ 
ಬಿಡಬೇಡ ಅವನ್ನ
ಶ್ರೀರಾಂಪುರ ಗಲ್ಲಿ ಸುತ್ತು 
ಮುಟ್ಟೊಕ್ ಬಂದ್ರೆ ಮಚ್ಚುಯೆತ್ತು 
ಬಿಡಬೇಡ ಅವನ್ನ  

hennige seere yake anda lyrics

ಹೆಣ್ಣಿಗೆ ಸೀರೆ ಯಾಕೆ ಅಂದ?
ತಾನನ...ತಂದಾನಾ..ನಾನನಾ..
ಹೆಣ್ಣಿಗೆ ಸೀರೆ ಯಾಕೆ ಅಂದ?
ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
ತಾನನ...ತಂದಾನಾ..ನಾನನಾ.
ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ

ಹಣೆಯಲ್ಲಿ ಸಿಂಧು ಅಂದದ ಬಂದು
ಕಣ್ಣಲ್ಲಿ ಕಾಡಿಗೆಯು ರುಚಿಯಾದ ಅಡಿಗೆ
ಇಂದು ಏಕೋ ಹೃದಯಕೆ ಹೆಣ್ಣಿನ ಅಂದವೇ,
ಮದುವೆಯ ಭೋಜನವಂತೆ,ಮದುವೆಯ ಭೋಜನವಂತೆ

ಹೆಣ್ಣಿಗೆ ಸೀರೆ ಯಾಕೆ ಅಂದ?

ಘಲ್ ಘಲ್ ಈ ಬಳೆಗಳು ನೋಡು..
ಒಳ್ಳೆಯ ಶಕುನ ನೋಡು..
ಜಲ್ ಜಲ್ ಗೆಜ್ಜೆಗಳು ನೋಡು..
ಸ್ವರಗಳ..ಸ್ವರಗಳ ಸರಿಗಮ ನೋಡು..
ಹೆಣ್ಣು ನಕ್ಕರೆ ಆ ದೀಪಾವಳಿ
ಹೆಣ್ಣು ನಡೆದರೆ ಆ ಸಂಕ್ರಾಂತಿಲಿ
ಬಂದು ಹೋಗೋ ಹಬ್ಬಗಳು ಯಾಕೆ ಬೇಕು
ಹೆಣ್ಣೇ ಕಣ್ಣಿಗೆ ಹಬ್ಬ
ಅಬ್ಬಬಬ್ಬ ಕಣ್ಣಿಗೆ ಹಬ್ಬ

ಹೆಣ್ಣಿಗೆ ಸೀರೆ ಯಾಕೆ ಅಂದ?
ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
ತಾನನ...ತಂದಾನಾ..ನಾನನಾ

ನವಿಲೇ ನನ್ನವಳೇ ಕೇಳೇ
ಹೃದಯದ ಮಾತು ಕೇಳೇ
ಸುಳ್ಳು ಪುಳ್ಲ್ಲೂ ಎಲ್ಲ
ಹೆಣ್ಣಿಗೆ..ಹೆಣ್ಣಿಗೆ ಒಡವೆ ಬೇಕಿಲ್ಲ..
ನಗುವೇ ಅವಳ ಒಡವೆಯಂತೆ 
ಸಹನೆ ಅವಳ ಜೊತೆಯಂತೆ 
ಭುವಿಗೆ ಅಲಂಕಾರ ಈ ಹೆಣ್ಣು
ಹೆಣ್ಣೇ ಕಣ್ಣಿಗೆ ಹಬ್ಬ
ಅಬ್ಬಬಬ್ಬ ಕಣ್ಣಿಗೆ ಹಬ್ಬ

ಹೆಣ್ಣಿಗೆ ಸೀರೆ ಯಾಕೆ ಅಂದ?
ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ

ತಾನನ...ತಂದಾನಾ..ನಾನನಾ

yarige beku ee loka lyrics

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತುಯೇ ಹೋದರು ಇರಬೇಕಾ?

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತುಯೇ ಹೋದರು ಇರಬೇಕಾ?

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ

ಮಕ್ಕಳ್ಕೆ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕಾ
ಯುದ್ಧವನ್ನು ಗೆಲ್ಲೋಕೆ ಬಲ್ಲವನು
ಕೈ ಕಟ್ಟಿ ಕೂರಬೇಕಾ
ನಾರಿಯೇ ಕಾಂಚನ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತುಯೇ ಹೋದರು ಇರಬೇಕಾ?

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ

ನರಿಗಳು ನ್ಯಾಯಾನ ಹೇಳುವಾಗ
ಕಿವಿ ಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೇರು ಇಡುವಾಗ
ಕೂಡಿಕೊಂಡು ಅಳಬೇಕಾ?
ಪಡೆದನು ಈ ದಿನ ಮನಿಸಿನ ನಾಯಕಾ
ಬಿಟ್ಟರೆ ಎಲ್ಲಾರಾ ಸೀನುವ ಸೈನಿಕಾ

ಯಾರಿಗೆ ಬೇ ಈಕು ಲೋಕ
ಯಾರಿಗೆ ಬೇ ಈಕು ಲೋಕ
ಮೋಸಕ್ಕೆ ಕೈ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತುಯೇ ಹೋದರು ಇರಬೇಕಾ?

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ

yenagali munde saagu nee

ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ 
ನನ್ನಾಣೆ ನನ್ನ ಮಾತು ಸುಳ್ಳಲ್ಲ 

ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ 
ನನ್ನಾಣೆ ನನ್ನ ಮಾತು ಸುಳ್ಳಲ್ಲ 



ಚಲಿಸುವ ಕಾಲವು, ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ - (2)
ಎಂದಿಗೊ, ನಾಳೆಗೊ, ಮುಂದಿನ ಬಾಳಲಿ 
ಗೆಲ್ಲುವಂತ ಸ್ಪೂರ್ತಿ ದಾರಿದೀಪ ನಿನಗೆ ಆ ಅನುಭವ - (2)
ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ - (2)
ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ - (2)



ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ, ಸಿಲುಕಿದ ಜೀವಕೆ
ಜೀವ ನೀಡುವ ಹೃದಯೇ, ದೈವವು
ಹರಿಸಿದಾ ಕೈಗಳು ನಮ್ಮನು ಬೆಳೆಸುತ
ವಿಧೀಯಬರಹ ವಾಗಿ,ಮೌನದಲ್ಲೇ ನಮ್ಮನು ಕಾಯುತ
ಪ್ರತಿಫಲ ಬಯಸದೆ, ತೋರಿದ ಕರುಣೆಯು
ಮೊದಲು ಮನುಜನೆಂಬ, ಸಾರ್ಥಕತೆಯ, 
ನೆಮ್ಮದೀ ತರುವುದು, ನಮ್ಮದೀ ತರವುದು

ಏನಾಗಲಿ ಮುಂದೆ ಸಾಗು ನೀ, 
ಪ್ರೀತಿಗಾಗೆ ಬದುಕು ಬಾಳಲಿ,  
ಪ್ರೀತಿಗಾಗೆ ಬದುಕು ಬಾಳಲಿ,  
ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ.

onde ondu saari lyrics in kannada

ಒಂದೇ ಒಂದು ಸಾರಿ ಕಣ್ಮುಂದೆ ಬಾರೆ 
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

ಒಂದೇ ಕ್ಷಣ ಎದುರಿದ್ದು 
ಒಂದೇ ಕ್ಷಣ ಎದುರಿದ್ದು 
ನನ್ನ ಈ ಬಾಳನು ನೀ ಸಿಂಗರಿಸಿದೆ 
ನನ್ನ ಮೈಮನಸನು ನೀ ಆವರಿಸಿದೆ


ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

ನಿನ್ನ ನಗು ನೋಡಿದಾಗ
ಹಗಲ್ಲಲು ಸಹ ತಿಳಿ ಬೆಳದಿಂಗಳು
ಸುರಿದಂತಾಇತು ಸವಿದಂತಾಇತು


ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ